ಬಳ್ಳಾರಿಯಲ್ಲಿ ‘ಪವರ್ * * * ಚಿತ್ರದ ಆಡಿಯೋ ರಿಲೀಸ್
Posted date: 26 Thu, Jun 2014 – 03:58:52 PM

೧೪ ರೀಲ್ಸ್ ಎಂಟರ್‌ಟೈನ್‌ಮೆಂಟ್ ಪ್ರೈ ಲಿ ಹಾಗೂ ಕೊಲ್ಲ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಗೋಪಿ ಅಚಂಟ, ರಾಮ್ ಅಚಂಟ ಹಾಗೂ ಅನಿಲ್ ಸುಂಕರ  ಅವರು ನಿರ್ಮಿಸುತ್ತಿರುವ ಮತ್ತು ಕೊಲ್ಲ ಪ್ರವೀಣ್ ಅವರ ಸಹ ನಿರ್ಮಾಣವಿರುವ ‘ಪವರ್ * * * ಚಿತ್ರದ  ಆಡಿಯೋ ರಿಲೀಸ್ ಜೂನ್ ೨೮ರ ಶನಿವಾರ ಸಂಜೆ ೭ಗಂಟೆಗೆ ಬಳ್ಳಾರಿಯಮುನ್ಸಿಪಲ್ ಗ್ರೌಂಡ್(ಹಳೇ ಬಸ್ ನಿಲ್ದಾಣದ ಹತ್ತಿರ) ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಅಪಾರ ವೆಚ್ಚದಲ್ಲಿ ಬಹು ತಾರಾಗಣದೊಂದಿಗೆ ನಿರ್ಮಾಣವಾಗಿರುವ ಬಹು ನಿರೀಕ್ಷಿತ ಈ ಚಿತ್ರದ ಆಡಿಯೋ ರಿಲೀಸ್‌ನಲ್ಲಿ ಚಿತ್ರದ ನಾಯಕರಾದ ಪವರ್‌ಸ್ಟಾರ್ ಪುನೀತ್‌ರಾಜಕುಮಾರ್, ನಾಯಕಿ ತ್ರಿಷಾ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ. ಅಂದಿನ ಸಮಾರಂಭಕ್ಕೆ ತೆಲುಗಿನ ಖ್ಯಾತ ನಟ ಸೂಪರ್‌ಸ್ಟಾರ್ ಮಹೇಶ್‌ಬಾಬು ಅವರು ಬರುವ ಸಾಧ್ಯತೆಯಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
‘ದೂಕುಡು ಚಿತ್ರದ ರಿಮೇಕ್ ಆಗಿರುವ ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಸಂಗೀತ ನೀಡಿದ್ದಾರೆ. ಈ ಚಿತ್ರದ ಹಾಡುಗಳ ಸೀಡಿಯನ್ನು ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಸಂಸ್ಥೆಯವರು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ.
 ಕೆ.ಮಾದೇಶ್ ಅವರು ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ  ಎ.ವಿ. ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ದೀಪು.ಎಸ್.ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಗಣೇಶ್, ಹರ್ಷ, ಮುರಳಿ, ಗಾಯಿತ್ರಿರಘುರಾಂ ನೃತ್ಯ ನಿರ್ದೇಶನ, ಕೆ.ಎಸ್.ಚಂಪಕಧಾಮ(ಬಾಬು) ಹಾಗೂ ಎಸ್.ಕುಮಾರ್ ಅವರ  ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ.
ಪವರ್‌ಸ್ಟಾರ್ ಪುನೀತ್‌ರಾಜಕುಮಾರ್, ತ್ರಿಷಾ,  ಶಿವಾಜಿಪ್ರಭು, ಕೆಲ್ಲಿ ಡಾರ್ಜಿ, ರಂಗಾಯಣರಘು, ಸಾಧುಕೋಕಿಲ, ಶರತ್ ಲೋಹಿತಾಶ್ವ, ಶೋಭ್‌ರಾಜ್, ಜೈಜಗದೀಶ್, ಚಿತ್ರಾ, ದೊಡ್ಡಣ್ಣ, ಆದಿಲೋಕೇಶ್, ಧರ್ಮ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.



 

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed